ಪ್ರವೇಶ
 

ಸ್ನಾತಕೋತ್ತರ ಪದವಿ, ಸ್ನಾತಕೊತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಶಿಕ್ಷಣಗಳ ಪ್ರವೇಶಕ್ಕೆ ಸಂಬಂಧಿಸಿದ ದಿನಚರಿ ವಿವರಗಳು

ಕ್ರ.ಸಂ

ವಿವರ

ಪ್ರತಿ ವರ್ಷ

1. ಅರ್ಜಿ ನೀಡಲು ಆರಂಭ ಮೇ ತಿಂಗಳ ಮೊದಲ ವಾರದಿಂದ ಜುಲೈ ಮೊದಲನೆಯ ವಾರದವರೆಗೆ
2. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಜುಲೈ ಮೊದಲ ವಾರದವರೆಗೆ
3. ಪ್ರವೇಶ ಪರೀಕ್ಷೆ ಜುಲೈ ಮೂರನೆಯ ವಾರದಿಂದ ಜುಲೈ ತಿಂಗಳ ಅಂತ್ಯದವರೆಗೆ
4. ಪ್ರವೇಶ ಪರೀಕ್ಷೆಯ ಅಂಕಗಳ ಅಂತಿಮಗೊಳಿಸುವಿಕೆ. ಜುಲೈ ತಿಂಗಳ ಅಂತ್ಯಕ್ಕೆ
5. ಆಯ್ಕೆಯಾದ ಹಾಗೂ ನಿರೀಕ್ಷಣೆಯ ತಾತ್ಕಾಲಿಕ ಪಟ್ಟಿ ಪ್ರಕಟ ಆಗಸ್ಟ್ ಮೊದಲ ವಾರ
6. ಆಯ್ಕೆಯಾದವರ ಪ್ರವೇಶ ಆಗಸ್ಟ್ ಮೊದಲ ವಾರದಿಂದ
7. ಎನ್.ಸಿ.ಸಿ / ಎನ್.ಎಸ್.ಎಸ್. ಮುಂತಾದ ವಿಶೇಷ ವರ್ಗದ ಅಭ್ಯರ್ಥಿಗಳ ಪ್ರವೇಶ ಆಗಸ್ಟ್ ಮೊದಲ ವಾರದಿಂದ
8. ನಿರೀಕ್ಷಣಾ ಅಭ್ಯರ್ಥಿಗಳ ಪ್ರವೇಶ ಆಗಸ್ಟ್ ಮೊದಲ ವಾರದಿಂದ
9. ಬೋಧನಾ ತರಗತಿಗಳ ಪ್ರಾರಂಭ ಆಗಸ್ಟ್ ಮೂರನೇ ವಾರದಿಂದ

ಸೂಚನೆ:
ಅ. ವೇಳಾಪಟ್ಟಿಗೆ ಅನುಗುಣವಾಗಿ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಆ. ಆಯ್ಕೆಯಾದ ಹಾಗೂ ನಿರೀಕ್ಷಣಾ ಅಭ್ಯರ್ಥಿಗಳ ಕ್ರೋಡೀಕೃತ ಪಟ್ಟಿಯನ್ನು ಸೂಚನಾ ಫಲಕ ಹಾಗೂ ವಿಶ್ವವಿದ್ಯಾಲಯದ ಅಂತರ್ಜಾಲ ( www.janapadauni.in) ದಲ್ಲಿ ಪ್ರಕಟಿಸಲಾಗುವುದು.
ಇ. ಪ್ರತ್ಯೇಕ ಸೂಚನಾ ಪತ್ರವನ್ನು ಸಂಬಂಧಿಸಿದವರಿಗೆ ಕಳುಹಿಸಲಾಗುವುದು.
ಈ. ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಇರುವುದಿಲ್ಲ.


ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ

1) ಎಂ.ಎ. ಕೋರ್ಸ್ ಗಳು: ಜನಪದ ಸಾಹಿತ್ಯ /ಜಾನಪದ ವಿಜ್ಞಾನ /ಜನಪದ ಕಲೆ/ಜನಪದ ಸಂವಹನ / ಜನಪದ ಪ್ರವಾಸೋದ್ಯಮ

ಅ. ಈ ವಿಶ್ವವಿದ್ಯಾಲಯದ ಅಥವಾ ಈ ವಿಶ್ವವಿದ್ಯಾಲಯ ತತ್ಸಮಾನ ಎಂದು ಒಪ್ಪಿಕೊಂಡ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಕಾಲಕಾಲಕ್ಕೆ ವಿಶ್ವವಿದ್ಯಾಲಯ ನಿಗದಿಪಡಿಸುವ ಕನಿಷ್ಠ ಶೇಕಡವಾರು ಅಂಕಗಳು ಹಾಗೂ ಅರ್ಹತೆಯನ್ನು ಹೊಂದಿರಬೇಕು.

ಆ. ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ.

2) ಎಂ.ಬಿ.ಎ. ಕೋರ್ಸ್ : ಗ್ರಾಮೀಣ ಮತ್ತು ಬುಡಕಟ್ಟು ವ್ಯವಹಾರ ನಿರ್ವಹಣೆ

ಅ. ಈ ವಿಶ್ವವಿದ್ಯಾಲಯದ ಅಥವಾ ಈ ವಿಶ್ವವಿದ್ಯಾಲಯ ತತ್ಸಮಾನ ಎಂದು ಒಪ್ಪಿಕೊಂಡ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮೂರು ವರ್ಷಗಳ / ನಾಲ್ಕು ವರ್ಷಗಳ ಪದವಿಯನ್ನು ಹೊಂದಿರಬೇಕು ಮತ್ತು ಪಿಜಿಸಿಇಟಿ ನಿಗದಿಪಡಿಸಿದ ಕನಿಷ್ಠ ಶೇಕಡವಾರು ಅಂಕಗಳನ್ನು ಪಡೆದಿರಬೇಕು.

ಆ. ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ.

3) ಸ್ನಾತಕೋತ್ತರ ಡಿಪ್ಲೊಮಾ ಶಿಕ್ಷಣ

ಅ. ಈ ವಿಶ್ವವಿದ್ಯಾಲಯದ ಅಥವಾ ಈ ವಿಶ್ವವಿದ್ಯಾಲಯ ತತ್ಸಮಾನ ಎಂದು ಒಪ್ಪಿಕೊಂಡ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

ಆ. ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ.

4) ಸರ್ಟಿಫಿಕೇಟ್ ಶಿಕ್ಷಣ

ಅ. ಎಸ್.ಎಸ್.ಎಲ್.ಸಿ. ಬೋರ್ಡ್ನವರು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸರ್ಕಾರದ ಮಾನ್ಯತೆ ಪಡೆದ ತತ್ಸಮಾನ ಶಿಕ್ಷಣವನ್ನು ಪೂರೈಸಿರಬೇಕು.

ಆ. ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ.


ಮಾರ್ಗಸೂಚಿ

1. ವಿದ್ಯಾರ್ಹತೆ, ಅರ್ಜಿ ನಮೂನೆ, ಪ್ರವೇಶ ಶುಲ್ಕ ಹಾಗೂ ಇತರ ಮಾಹಿತಿಗಳನ್ನು ವಿವರಣಾ ಪುಸ್ತಕದಿಂದ ಪಡೆಯಬಹುದು ಅಥವಾ ವಿಶ್ವವಿದ್ಯಾಲಯದ ವೆಬ್ಸೈಟ್ WWW.janapadauni.in ನ್ನು ಸಂಪರ್ಕಿಸಬಹುದು.

2. ಅಂತಿಮ ವರ್ಷದ ಪದವಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಫಲಿತಾಂಶ ಪ್ರಕಟಣೆಯ ನಂತರ ಕೂಡಲೇ ಅಂಕಪಟ್ಟಿಗಳನ್ನು ಇಂಟರ್ನೆಟ್ ಮೂಲಕ ಪಡೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವುದು.

3. ಅನಿವಾಸಿ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಯಮಗಳನುಸಾರ ಮುಕ್ತ ಪ್ರವೇಶವನ್ನು ಕಲ್ಪಿಸಲಾಗುವುದು.

4. ವಿವರಣಾ ಪುಸ್ತಕದ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 200/-( ರೂ. ಎರಡು ನೂರು ಮಾತ್ರ) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ ಗ 1 ರ ವಿದ್ಯಾಗಳಿಗೆ ರೂ. 100/-( ರೂ. ಒಂದು ನೂರು ಮಾತ್ರ)ಗಳಾಗಿರುತ್ತದೆ. ಅಂತಹ ವಿದ್ಯಾರ್ಥಿಗಳು ಜಾತಿ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

5. ಅರ್ಜಿ ಹಾಗೂ ವಿವರಣಾ ಪುಸ್ತಕಗಳನ್ನು ಮೇ ಮೊದಲ ವಾರದಿಂದ ಜುಲೈ ಮೊದಲನೆಯ ವಾರದವರೆಗೆ ಪಡೆಯಬಹುದು.

6. ಅಂಚೆ ಮೂಲಕ ಅರ್ಜಿ ಹಾಗೂ ವಿವರಣಾ ಪುಸ್ತಕಗಳನ್ನು ಪಡೆಯಲು ಇಚ್ಛಿಸುವವರು, ನಿಗದಿಪಡಿಸಿದ ಶುಲ್ಕದ ಡಿ.ಡಿ.ಯನ್ನು ಹಣಕಾಸು ಅಧಿಕಾರಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಇವರ ಹೆಸರಿಗೆ ಪಡೆದು ರೂ. 60/- ( ರೂ. ಅರವತ್ತು ಮಾತ್ರ) ಅಂಚೆ ಚೀಟಿವುಳ್ಳ ಸ್ವಯಂ ವಿಳಾಸ ಹೊಂದಿದ ಲಕೋಟೆಯನ್ನು ಕುಲಸಚಿವರು (ಮೌಲ್ಯಮಾಪನ), ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ - 581 205 ಇವರಿಗೆ ಸಲ್ಲಿಸಿ ಪಡೆಯಬಹುದು.

7. ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಂಡ ಅರ್ಜಿಗಳಿಗೆ ರೂ. 250/- ( ರೂ. ಎರಡು ನೂರು ಐವತ್ತು ಮಾತ್ರ) (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ ಗ 1 ರ ವಿದ್ಯಾಗಳಿಗೆ ರೂ. 125/- ರೂ. ಒಂದು ನೂರು ಇಪ್ಪತ್ತೈದು ಮಾತ್ರ) ಮೊತ್ತದ ಡಿ.ಡಿ. ಯನ್ನು ಲಗತ್ತಿಸಿ ಸಲ್ಲಿಸತಕ್ಕದ್ದು.

8. ಪ್ರತಿ ಕೋರ್ಸಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಸಲ್ಲಿಸಿದ ಅರ್ಜಿ ಬೇರೆ ಕೋರ್ಸಿಗೆ ವರ್ಗಾವಣೆ ಮಾಡಲಾಗುವುದಿಲ್ಲ.

9. ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು (ಮೌಲ್ಯಮಾಪನ) ಇವರಿಗೆ ವೇಳಾಪಟ್ಟಿಯಲ್ಲಿ ಸೂಚಿಸಿದ ದಿನಾಂಕದೊಳಗೆ ಸಲ್ಲಿಸಬೇಕು.

10. ಯಾವುದೇ ಕೋರ್ಸ್ ಗಳಿಗೆ ಅಗತ್ಯ ಸಂಖ್ಯೆಯ ಅರ್ಜಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಕೋರ್ಸ್ ಗಳನ್ನು ನಡೆಸುವುದರ ಬಗ್ಗೆ ವಿಶ್ವವಿದ್ಯಾಲಯದ ನಿರ್ಣಯವೇ ಅಂತಿಮ.

11. ವಿವಿಧ ಕೋರ್ಸ್ಗಳ ಪ್ರವೇಶ ಶುಲ್ಕದ ವಿವರ ಹಾಗೂ ಪ್ರವೇಶ ಕೌನ್ಸಿಲಿಂಗ್ ದಿನಾಂಕಗಳ ಮಾಹಿತಿಯನ್ನು ಅರ್ಜಿಗಳೊಂದಿಗೆ ನೀಡಲಾಗುವುದು.

12. ಹೆಚ್ಚಿನ ವಿವರಗಳಿಗೆ ವಿಶ್ವವಿದ್ಯಾಲಯದ ಕಛೇರಿಗೆ ಭೇಟಿ ನೀಡಿ ವಿಚಾರಿಸಬಹುದು ಅಥವಾ ಕಛೇರಿ ದೂರವಾಣಿ ಸಂಖ್ಯೆ: 0836-2255180 ರ ಮೂಲಕ ಸಂಪರ್ಕಿಸಬಹುದು.


ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳು:

1. ಗ್ರಂಥಾಲಯ

2. ಅಂತರ್ಜಾಲ ವ್ಯವಸ್ಥೆ

3. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನಡೆಸುವ ವಿದ್ಯಾನಿಲಯ

4. ಉಪಾಹಾರ ಮಂದಿರ

5. ವಿದ್ಯಾವೇತನ / ಶಿಷ್ಯ ವೇತನ

6. ನಿರಂತರವಾಗಿ ಲಭಿಸುವ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India